this post is not a review, but an excerpt from the above said autobiography of one of the greatest and most celebrated poets of Kannada Literature... Mr.Gopalkrishna Adiga. this post is particularly about his alltime great poem 'Yaava Mohana Murali Kareyitu'. it is one poem which inspired me, troubled me, questioned me, intrigued me and what not!! it was one poem which left a lasting impression on my poem writing skills and no other style satisfies me than the poem with deep self contemplation bordering on the 'conscious' and the 'sub-conscious' which very much manifests in most of Adiga's literature...
the particular poem in question was already a popular one with generations of Kannadiga's listening to its rendition by the silky voice of Ratnamala Prakash to the tune of Mysore Subbanna (or was it C Ashwath?) when it was included as a song in the movie 'America America'. and that was when it caught me as with many others of my age. it is said Mr.Manomurthy,a resident of USA for quite a long period and a debutant music composer with America America , hadnot listened to the Subbanna version before he scored music for the film... i remember reading, where he claims that it would have been impossible to arrive at the tune scored for the movie had he listened to the earlier version.. such was its effect in the older population.
it was this tune and its all pervading setting in the movie that renewed the interest in the song, and till date remains my top favorite...so when i found a reference to it in Mr.Adiga's autobio, i had to share it..and before that i gve you the song below with its transliteration following. English cant do justice to the depth the song has in Kannada..but this one here is for just an idea to the benefit of Non-Kannadiga's as to what it might have entailed !! (courtesy: http://kannadahaadulyrics.blogspot.in/2011/05/yava-mohana-murali-kareyitu.html )
ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು
ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದೀ ರಿಂಗನ
ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯ ದಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೆ?
ವಿವಶವಾಯಿತು ಪ್ರಾಣ - ಹಾ!!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು
ಇದ್ದಕಿದ್ದಲೇ ನಿನ್ನನು
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕಯ್ಯನು
ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು
ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದೀ ರಿಂಗನ
ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯ ದಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೆ?
ವಿವಶವಾಯಿತು ಪ್ರಾಣ - ಹಾ!!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು
ಇದ್ದಕಿದ್ದಲೇ ನಿನ್ನನು
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕಯ್ಯನು
ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
Translation:
What mesmerizing flute was it that called
You to a distant shore?What paradise was it that attracted
Your dusty eyes?
A bed of flowers with the scent of a sandal paste
The kiss of a shoulder of relationshipIn the garden of worldly desires
A harmonious sound is ringing in the ears
Somewhere beyond the seven seas
A hidden sea awaitsSilent murmur of knee-deep waves
Did it reach here too today?
This life became senseless
Your soul got engrossedTo leave behind whatever you have
And to yearn for what you don't, is life!!
What mesmerizing flute was it that called
You all of a suden?
What paradise was it that extended
It's radiant hand?
What mesmerizing flute was it that called
You to a distant shore?
(the America America song on youtube http://www.youtube.com/watch?v=ewvaZPdT6N0 )
(the America America song on youtube http://www.youtube.com/watch?v=ewvaZPdT6N0 )
The excerpt from the autobiography-
ಯಾವ ಮೋಹನ ಮುರಳಿ ಕರೆಯಿತು... (yaava mohana murali kareyitu)
"ನನಗೆ ಆಗ ೧೭ ರ ವಯಸ್ಸು . ಇನ್ನೂ ಕಿಶೋರ . ಆಗಲೇ ಅಷ್ಟು ಕವನಗಳನ್ನು ಬರೆದಿದ್ದೆ. ಅವುಗಳನ್ನು ಮಂಗಳೂರಿನ 'ಬಡವರ ಬಂಧು ', ' ರಾಷ್ಟ್ರ ಬಂಧು ', ಪತ್ರಿಕೆಗಳು , ಬೆಂಗಳೂರಿನ 'ಸುಬೋಧ' ,' ಕತೆಗಾರ' ಪತ್ರಿಕೆಗಳು ಪ್ರಕಟಿಸಿದ್ದವು . ಬರೆದದ್ದರಲ್ಲಿ ಕವನಗಳೇ ಜಾಸ್ತಿಯಾಗಿದ್ದರೂ ಒಂದಷ್ಟು ಕಥೆಗಳು ಮತ್ತು ಲೇಖನಗಳೂ ಇದ್ದವು. ಅನುಭವ ವೈವಿಧ್ಯ ಕಿಶೋರತ್ವಕ್ಕೆ ತಕ್ಕಷ್ಟು ಇದ್ದರೂ ಪ್ರಣಯ, ಪ್ರೀತಿ- ಇವುಗಳ ಅನುಭವ ಅಷ್ಟಾಗಿರಲಿಲ್ಲ. ಆ ಕಾಲಕ್ಕೆ ತಕ್ಕ calf love ಇದ್ದಿರಬೇಕು. ಕ್ಲಾಸುಗಳಿಗೆ ಬರುತ್ತಿದ್ದ ಹುಡುಗಿಯರಲ್ಲಿ ಕೆಲವರು ಮನಸ್ಸನ್ನು ಆವರಿಸಿಕೊಂಡಿದ್ದರು . ಹೈ ಸ್ಕೂಲಿನಲ್ಲಿ ಓದುತ್ತಿದ್ದಾಗ ದೂರದಿಂದಲೇ ನೋಡಿ ಮೆಚ್ಚಿದ ಚಂದದ ಹುಡುಗಿಯೊಬ್ಬಳ ನೆನಪು ಬಹಳ ದಿನ ಕಾಡುತ್ತಿತ್ತು. ಆನಂತರ ಎಸ. ಎಸ. ಎಲ್. ಸಿ ಆಗಿ ರಜೆಯಲ್ಲಿ ಮನೆಗೆ ಬಂದು ಇದ್ದಾಗ ಒಂದು ಹೊಸ ಅನುಭವವಾಯಿತು.
ಆ ಅನುಭವದ ಕಾವು ಬಹಳ ವರ್ಷಗಳ ಕಾಲ ಮನಸ್ಸಿನಲ್ಲೇ ಇತ್ತು. ಈಗಲೂ ಅದು ನೆನಪಿನಲ್ಲಿದೆ. ಕಾಮ ಮೂಲವಾದರೂ ಪ್ರೀತಿ ಮನುಷ್ಯನಲ್ಲಿ ತಲೆ ದೋರುವುದು, ವ್ಯಕ್ತವಾಗುವುದು ಮಾನಸಿಕವಾಗಿ. ಆಗ ಮನಸ್ಸು ಹಿಗ್ಗುವುದು, ಸ್ವರ್ಥ್ಹಕ್ಕೆ ಹೊಸ ಆಯಾಮಗಳೂ ದಿಗಂತಗಳೂ ಗೋಚರಿಸುವುದು. ಸುಂದರವಾದ ರೂಪ ನೋಡಬೇಕು, ಹತ್ತಿರ ಇರಬೇಕು; ಏನೇನೋ ಮಾತಾಡಬೇಕು, ಕಂಡ ಕನಸುಗಳನ್ನೆಲ್ಲ ಹೇಳಬೇಕು; ಬದುಕಿನ ಭವಿಷ್ಯವನ್ನು ಕಂಡು ಆ ಕಂಕೆಯಲ್ಲೇ ಲೀನನಾಗಬೇಕು- ಇದು ಕಲ್ಪನಾ ಶಕ್ತಿಯುಳ್ಳ ಕಿಶೋರನ ಪ್ರೇಮ ಜೀವನದ ಮೊದಲ ಹೆಜ್ಜೆ .ನಾನು ಮೈಸೂರಿಗೆ ತೆರಳಿ ಅಲ್ಲಿ ಇನ್ನೊಂದು ಬಗೆಯ ಅಜ್ಞಾತ , ಅಪರಿಚಿತ ಬದುಕಿನಲ್ಲಿ ಒಂದಾಗಲು ಕಲಿಯಲು ಹೊರಡಬೇಕಾಗಿದ್ದ ಕಾಲದಲ್ಲೇ ಇಂಥ ಹೆಜ್ಜೆಗುರುತಿನ ಒಂದು ಘಟನೆ ನಡೆಯಿತು.
ನಮ್ಮ ತಂದೆಯವರಿಗೆ ತಮ್ಮ ಮಗಳ ಜಾತಕ ತೋರಿಸಿ ಮಾನಸಿಕವಾದ ಕೆಲವು ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಮುರ್ದೆಶ್ವರದಿಂದ ಒಬ್ಬ ತಾಯಿ ನಮ್ಮ ಮನೆಗೆ ಬಂದರು. ಆಕೆಯ ಮಗಳು ಹದಿನಾಲ್ಕು ಹದಿನೈದು ವರ್ಷದ ಮೃದು ಮಧುರ ಸ್ವಭಾವದ ಸುಂದರಿ. ಆಕೆಯ ಹೆಸರು ಇನ್ನೂ ನೆನಪಿದೆ- ಲೀಲಾವತಿ . ಅವಳು ನಮ್ಮ ಮನೆಯಲ್ಲಿ ಒಂದು ದಿನ ಇದ್ದಳು . ಅವಳಿಗೆ ನನ್ನ ಮನಸ್ಸು ಮಾರು ಹೋಯಿತು.ಹತ್ತಿರ ಹತ್ತಿರ ಕುಳಿತು ನಮ್ಮ ಶಾಲೆಯ ಬಗ್ಗೆ ಪ್ರಶ್ನೆ ಕೇಳಿದಳು, ತನ್ನ ಶಾಲೆಯ ಬಗ್ಗೆ ಮಾತಾಡಿದಳು. ಎಲ್ಲೋ ಯಾವ ಜನ್ಮದಲ್ಲೋ ಕಂಡ ಅಪ್ಸರೆಯಾಗಿ ನನಗೆ ಆಗ ಕಂಡಳು . ಮನೆಯ ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ನಾವಿಬ್ಬರೂ ಹೋಗಿ ಕೈ ಮುಗಿದು ಪ್ರದಕ್ಷಿಣೆ ಹಾಕಿ ಬಂದೆವು. ಒಂದೇ ದಿನದಲ್ಲಿ ಭಾರೀ ಹತ್ತಿರ ಬಂದ ಅನುಭವ. ಅನಂತರ ಆಕೆ ಹೊರಟು ಹೋದಳು. ಆದರೂ ಮನಸ್ಸಿಗೆ ಆಕೆಯದೇ ನೆನಪು. ಆಕೆಯ ಸಹವಾಸದ ಕನಸು. ಪ್ರೇಮದ ಪಂಚಾಂಗವಾಗಿ ನನ್ನ ಜೀವನದಲ್ಲಿ ಈ ಅನುಭವ ಸ್ಥಾಯಿಯಾಗಿ ನಿಂತಿತು.
ನನ್ನ ಮುಂದಿನ ಜೀವನದ ಸಾಹಿತ್ಯ ಕೃತಿಗಳಲ್ಲಿ ಕವನಗಳಲ್ಲಿ ಹಾಸುಹೊಕ್ಕಾಗಿ ನಿಂತ ಈ ಅನುಭವ ಈ ಮಾಸಿಯಾದರೂ, ಬೇರೆ ಬೇರೆ ರೂಪಗಳಲ್ಲಿ ಅದು ವ್ಯಕ್ತವಾಗುತ್ತ ಬಂದು ನನ್ನ ಬದುಕಿಗೆ ಆಧಾರವಾಗಿರುವ ಲಲಿತೆಯ ರೂಪದಲ್ಲಿ, ಮಾತುಗಳಲ್ಲಿ, ಕೃತಿಗಳಲ್ಲಿ, ಪ್ರೇಮದಲ್ಲಿ ಅದೇ ಭಾವ ಕಂಡುಕೊಂಡೆ. ನಾನಾ ಎಳೆಗಳು ಸೇರಿ ಬದುಕಿಗೆ ಆಗಾಗ ತನ್ನ ಸಾಫಲ್ಯವನ್ನು ಕಾಣುತ್ತದೆ ಎನ್ನಬಹುದು. "